ಗೌಪ್ಯತಾ ನೀತಿ


ಸ್ಮಾರ್ಟ್ ಫಾರ್ಮಿ೦ಗ್ ಸಂಸ್ಥೆಯು ಭಾರತದಲ್ಲಿ ಆಲೂಗೆಡ್ಡೆ ಬೆಳೆಯಲ್ಲಿ ಸ್ಮಾರ್ಟ್ ಫಾರ್ಮಿ೦ಗ್ ಅನ್ನುವ ಒಂದು ಉಚಿತ ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಫಾರ್ಮಿ೦ಗ್ ಆಪ್ ಬಳಕೆ ಮಾಡಲು  ರೈತರು ಹಣ ನೀಡಬೇಕಾಗಿಲ್ಲ. ಈ ಗೌಪ್ಯತಾ ನೀತಿಯು ಸಂಭವನೀಯ ಬಳಕೆದಾರ ವ್ಯಯಕ್ತಿಕ ಮಾಹಿತಿಯ ಸಂಗ್ರಹ, ಬಳಕೆ ಮತ್ತು ಬಹಿರಂಗ ಪಡಿಸುವ ಬಗ್ಗೆ ಸ್ಮಾರ್ಟ್ ಫಾರ್ಮಿ೦ಗ್ ಸಂಸ್ಥೆಯ ನೀತಿಯನ್ನು ತಿಳಿಸುತ್ತದೆ.

ಈ ನೀತಿಗೆ ಸಂಬಂಧಿಸಿದಂತೆ ನೀವು ಈ ಆಪ್ ನ ಸೇವೆಯನ್ನು ಬಳಸಿದರೆ, ಮಾಹಿತಿಯನ್ನು ಸಂಗ್ರಹಿಸುವ ಮತ್ತು ಬಳಸುವುದಕ್ಕೆ ನೀವು ಒಪ್ಪಿಗೆ ಸೂಚಿಸಿದಂತೆ. ಇಲ್ಲಿ ಸಂಗ್ರಹಿಸುವ ವ್ಯಯಕ್ತಿಕ ಮಾಹಿತಿಯನ್ನು ರೈತರಿಗೆ ಉತ್ತಮ ಮತ್ತು ಉಪಯುಕ್ತ ಸೇವೆಯನ್ನು ನೀಡಲು ಬಳಸಲಾಗುತ್ತದೆ. ನಮ್ಮ ಗೌಪ್ಯತಾ ನೀತಿಯಲ್ಲಿ ವಿವರಿಸುವ ರೀತಿಯನ್ನು ಹೊರತು ಪಡಿಸಿ, ನಿಮ್ಮ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವಿದಿಲ್ಲ.

ಸಂಪರ್ಕ ಮಾಹಿತಿ:

ವೆಬ್ ವಿಳಾಸ : (website) www.smartfarmingtech.com
ಇಮೇಲ್ : (e-mail) info@smartfarmingtech.com
ಅಂಚೆ ವಿಳಾಸ: (address) Kapelstraat 24
ಪೋಸ್ಟಲ್ ಕೋಡ್ ಮತ್ತು ನಗರ: 5366 BZ, Megen
(postal code and city)
ದೇಶ: (country) the Netherlands

ಮಾಹಿತಿ ಸಂಗ್ರಹ ಮತ್ತು ಬಳಕೆ

ಈ ಸೇವೆಯ ಉತ್ತಮ ಬಳಕೆಗೆ,ನೀವು ಕೆಲವೊಂದು ನಿಮ್ಮ ವ್ಯಯಕ್ತಿಕ ಗುರುತಿನ ಮಾಹಿತಿಯನ್ನು ನೀಡಬೇಕಾಗುತ್ತದೆ. ಅವುಗಳೆಂದರೆ.

 • ಹೆಸರು,
 • ಮೊಬೈಲ್ ಸಂಖ್ಯೆ ,
 • ಸ್ಥಳ (ವಿಳಾಸ),
 • ಹುಟ್ಟಿದ ದಿನಾಂಕ,
 • ಅಂಚೆ ವಿಳಾಸ,
 • ಬೆಳೆದಂತಹ ಬೆಳೆಗಳು,
 • ಆಪ್ ಬಳಕೆ,

ನಿಮ್ಮಿಂದ ಪಡೆದ ಮಾಹಿತಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ ಮತ್ತು ನಮ್ಮ ಸೇವೆಯನ್ನು ನಿಮಗೆ ಕೊಡಲು ಮಾತ್ರ ಬಳಸಲಾಗುತ್ತದೆ. ಈ ಗೌಪ್ಯತಾ ನೀತಿಯಲ್ಲಿ ವಿವರಿಸಿದಂತೆ ನಿಮ್ಮ ಮಾಹಿತಿಯನ್ನು ಮಾಹಿತಿಯನ್ನುಬೇರೆ ಬೇರೆ ರೀತಿಯಲ್ಲಿ  ಬಳಸಲಾಗುತ್ತದೆ.

ಆಪ್ ಇತರ ಪಾಲುದಾರರೊಂದಿಗೆ ಸಹ ಸಂಪರ್ಕದಲ್ಲಿ ಇರುವುದರಿಂದ, ನಿಮ್ಮನ್ನು ಗುರುತುಸಲು, ನಿಮ್ಮ ಗುರುತಿನ  ಮಾಹಿತಿಯನ್ನು ಅವರೂ ಉಪಯೋಗಿಸಬಹುದು.ಈ ಅಪ್ ನೊಂದಿಗೆ ಕೈಜೋಡಿಸಿರುವ ಇತರೆ ಪಾಲುದಾರರು:

 • ಗೂಗಲ್ ಪ್ಲೇ ಸೆರ್ವಿಸಸ್,
 • ಗೂಗಲ್ ಆಡ್ ವರ್ಡ್ಸ್,
 • ಇ ಟಿ ಸಿ ಇಂಡಿಯಾ,
 • ಪ್ರಿ ಬೇಸ್,
 • ಡಿಜಿಟಲ್ ಓಷನ್,
 • ಲಾಗ್ ಡೇಟ್,

 ನೀವು ನಮ್ಮ ಸೇವೆಯನ್ನು ಉಪಯೋಗಿಸುವಾಗ, ಆಪ್ ನಲ್ಲಿ ಏನಾದರು ತೊಂದರೆ ಕಂಡುಬಂದರೆ, ನಿಮ್ಮ ಫೋನ್ ನಲ್ಲಿ ಮಾಹಿತಿಯನ್ನು ಲಾಗ್ ಡೇಟಾ ಮೂಲಕ ಪಡೆಯುತ್ತೇವೆ. ಲಾಗ್ ಡೇಟಾ ಮಾಹಿತಿಯನ್ನು ನೀಡುವಾಗ ನಿಮ್ಮ ಫೋನ್ ನ ಇಂಟರ್ ಪ್ರೋಟೊಕಾಲ್ (” IP”) ವಿಳಾಸ, ಮೊಬೈಲ್ ಹೆಸರು, ಅಪರೇಟಿ೦ಗ್ ಸಿಸ್ಟಮ್ , ಆಪ್ ಉಪಯೋಗಿಸಿದ ದಿನಾಂಕ, ಸಮಯ, ಸ್ಥಳ, ಮುಂತಾದ ಮಾಹಿತಿಯನ್ನು ಒಳಗೊಂಡಿರುತ್ತದೆ.

ಕುಕ್ಕೀಸ್

ಕುಕ್ಕೀಸ್ ಅಂದರೆ  ಅನಾಮಧೇಯ ಏಕಮಾತ್ರ ಗುರುತಿನ ಸಣ್ಣ ಪ್ರಮಾಣದ ಮಾಹಿತಿ. ನೀವು ಬೇರೆ ಬೇರೆ ವೆಬ್ ಸೈಟ್ ಗಳನ್ನು ಸಂಪರ್ಕಿಸಿ ಅದು ನಿಮ್ಮ ಮೊಬೈಲ್ ಇಂಟರ್ನಲ್ ಸ್ಟೋರೇಜ್ ನಲ್ಲಿ ಉಳಿಕೆಯಾದಾಗ ಕುಕ್ಕೀಸ್ ಈ ಮಾಹಿತಿ ನೀಡುತ್ತದೆ.

ಈ ಆಪ್ ಸೇವೆಯು ಇಂತಹ ಕುಕ್ಕೀಸ್ ಅನ್ನು ಪ್ರತೀಕವಾಗಿ ಉಪಯೋಗಿಸುವುದಿಲ್ಲ. ಆದರೆ  ಈ ಆಪ್ ಕುಕ್ಕೀಸ್ ಬಳಸಿ ಮಾಹಿತಿ ನೀಡುವ ಇತರೆ ಪಾಲುದಾದರು ಒದಗಿಸುವ ಮಾಹಿತಿಯನ್ನು ಬಳಸುತ್ತದೆ. ಈ ಕುಕ್ಕೀಸ್ ಅನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಭಿಪ್ರಾಯ ನಿಮ್ಮದಾಗಿರುತ್ತದೆ. ಆಪ್ ವತಿಯಿಂದ ಕುಕ್ಕೀಸ್ ನಿಮ್ಮ ಮೊಬೈಲ್ ಗೆ  ಬಂದಾಗ ನಿಮಗೆ ಸಂದೇಶ  ಬರುತ್ತದೆ. ನೀವು ಈ ಕುಕ್ಕೀಸ್ ಅನ್ನು ತಿರಸ್ಕರಿಸಿದರೆ ಆಪ್ ನ ಕೆಲವು ಸೇವೆಗಳು ನಿಮಗೆ ಲಭ್ಯವಿರುವುದಿಲ್ಲ.

ಮಾಹಿತಿಯನ್ನು ಇಟ್ಟುಕೊಳ್ಳುವ ಅವಧಿ

ನೀವು ಆಪ್ ಸೇವೆಗಳನ್ನು ಬಳಸುವವರೆಗೆ ನಿಮ್ಮ ಮಾಹಿತಿ ನಮ್ಮ ಬಳಿ ಇರುತ್ತದೆ ಮತ್ತು ನೀವು ಕೊನೆಯ ಬರಿ ಆಪ್ ಬಳಸಿದ ನಂತರ ಎರೆಡು ವರ್ಷಗಳವರೆಗೆ ನಿಮ್ಮ ಮಾಹಿತಿ ನಮ್ಮ ಬಳಿ ಇರುತ್ತದೆ. ಈ ಅವಧಿಯ ನಂತರ ನಿಮ್ಮ ಮಾಹಿತಿಯನ್ನು ಅದು ನಿಮ್ಮದು ಎಂದು ಗುರುತಿಸಲಾಗದಂತೆ ಬಳಸಲಾಗುತ್ತದೆ.

ಸೇವೆ ಒದಗಿಸುವವರು

ಈ ಕೆಳಗಿನ ಕಾರಣಗಳಿಗಾಗಿ ನಾವು ಇತರೆ ವ್ಯಕ್ತಿ ಅಥವಾ ಸಂಸ್ಥೆಯ ಸೇವೆಗಳನ್ನು ಪಡೆಯಬಹುದು:

 • ಆಪ್ ನ ಸೇವೆಯನ್ನು ಸುಗಮಗೊಳಿಸಲು;
 • ನಮ್ಮ ಪರವಾಗಿ ಸೇವೆ ಒದಗಿಸಲು;
 • ಸೇವೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸಲು ಅಥವಾ;
 • ಆಪ್ ನ ಸೇವೆಯನ್ನು ಹೇಗೆ ಉಪಯೋಗಿಸಲಾಗುತ್ತಿದೆ ಎಂದು ವಿಶ್ಲೇಷಿಸಲು.

ನಮ್ಮ ಪರವಾಗಿ ಅವರು ಸೇವೆಗಳನ್ನು ಒದಗಿಸಲು, ಈ ಸೇವೆಗಳನ್ನು ಒದಗಿಸುವ ಸಂಸ್ಥೆ ಅಥವಾ ವ್ಯಕ್ತಿಗಳು ನಿಮ್ಮ ವ್ಯಕ್ತಿಕ ಮಾಹಿತಿಯನ್ನು ಉಪಯೋಗಿಸುತ್ತಾರೆ. ಆದರೆ ಅವರು ಆಪ್ ಸೇವೆಗಳಿಗೆ ಹೊರತಾಗಿ  ಬೇರೆ ಯಾವುದೇ ಉದ್ದೇಶಕ್ಕಾಗಿ ನಿಮ್ಮ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ ಮತ್ತು  ಬಳಸುವುದಿಲ್ಲ.

ಭದ್ರತೆ

ನೀವು ನಂಬಿಕೆ ಇಟ್ಟು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಿರುವುದನ್ನು ನಾವು ಗೌರವಿಸುತ್ತೇವೆ. ಆದ್ದರಿಂದ ನಿಮ್ಮ ಮಾಹಿತಿಯನ್ನು ರಕ್ಷಿಸುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ನಿಮ್ಮ ಮಾಹಿತಿ ಸುರಕ್ಷಿತವಾಗಿಡಲು ನಾವು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದ್ದೇವೆ:

 • ಈ ಆಪ್ ನಮ್ಮ  ಸರ್ವರ್ ಗಳೊಂದಿಗೆ ಸುರಕ್ಷಿತ ಸಂಪರ್ಕವನ್ನು ಹೊಂದಿದೆ.
 • ನಮ್ಮ ಸರ್ವರ್ ಗಳು ಮತ್ತು ಇತರೆ ಉಪಕರಣಗಳು ಸುರಕ್ಷತಾ ವ್ಯವಸ್ಥೆ ಯನ್ನು ಸಂಬಂಧ ಪಟ್ಟ ಸಾಫ್ಟ್ ವೇರ್ ಬಳಸಿ ನವೀಕರಿಸುತ್ತದೆ
 • ನಿಮ್ಮ ಮಾಹಿತಿ ಶೇಖರಿಸಿರುವ,ವಿಶ್ಲೇಷಿಸಿರುವ ಮತ್ತು ಒದಗಿಸುವ ಎಲ್ಲಾ ಉಪಕರಣಗಳು ವೈರಸ್ ಸ್ಕಾನಿಂಗ್ ವ್ಯವಸ್ಥೆಯನ್ನು ಹೊಂದಿವೆ
 • ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ನಿಮ್ಮ ಮಾಹಿತಿಗೆ ಲಭ್ಯತೆ ನೀಡಲಾಗಿರುತ್ತದೆ.
 • ನಿಮ್ಮ ಮಾಹಿತಿಗೆ ಲಭ್ಯತೆ ಇರುವವರು ಗೌಪ್ಯತೆಗೆ ಬದ್ಧರಾಗಿರುತ್ತಾರೆ
 • ನಿಮ್ಮ ಮಾಹಿತಿಗೆ ಲಭ್ಯತೆ  ಇರುವ ಎಲ್ಲಾ ಪಾಲುದಾರರು ಮಾಹಿತಿ ಸುರಕ್ಷತೆ ಬಗ್ಗೆ ಒಪ್ಪಂದಕ್ಕೆ ಒಳಪಟ್ಟಿರುತ್ತಾರೆ ಮತ್ತು ಸ್ಮಾರ್ಟ್ ಫಾರ್ಮಿಂಗ್ ಸೇವೆಗಾಗಿ ಮಾತ್ರ ನಿಮ್ಮ ಮಾಹಿತಿಯನ್ನು ಅವರು ವಿಶ್ಲೇಷಿಸುತ್ತಾರೆ.

ಇತರೆ ವೆಬ್ ಸೈಟ್ ಗಳಿಗೆ ಸಂಪರ್ಕ (ಲಿಂಕ್ )

ಈ ಆಪ್ ಸೇವೆಯು ಇತರೆ ವೆಬ್ ಸೈಟ್ ಗಳಿಗೆ ಸಂಪರ್ಕ (ಲಿಂಕ್ ) ಹೊಂದಿದೆ. ನೀವು ಇತರೆ ಪಾಲುದಾರರ ವೆಬ್ ಸೈಟ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಆ ವೆಬ್ ಸೈಟ್ ವೀಕ್ಷಿಸಬಹುದು. ಆದರೆ ಗಮನಿಸಿ ಆ ವೆಬ್ ಸೈಟ್ ಗಳನ್ನು ನಾವು ನಿರ್ವಹಿಸುವುದಿಲ್ಲ. ಆದ್ದರಿಂದ ಆ ವೆಬ್ ಸೈಟ್ ಗಳ ಗೌಪ್ಯತಾ ನೀತಿಯನ್ನು ನೀವು ನೋಡಬೇಕಾಗಿ ನಾವು ಬಲವಾಗಿ ಶಿಫಾರಸ್ಸು ಮಾಡುತ್ತೇವೆ. ಇತರೆ ಪಾಲುದಾರರ ವೆಬ್ ಸೈಟ್ ನಲ್ಲಿ ಇರುವ ಮಾಹಿತಿಗೆ ಮತ್ತು ಅವರ ಗೌಪ್ಯತಾ ನೀತಿಗೆ ನಾವು ಜವಾಬ್ದಾರರಲ್ಲ.

ಮಕ್ಕಳ ವೈಯಕ್ತಿಕ ಮಾಹಿತಿ

ಈ ಆಪ್ ಸೇವೆಗೆ 16   ವರ್ಷಕ್ಕಿಂತ ಕೆಳಗಿನ ಮಕ್ಕಳ ಮಾಹಿತಿಯ ಅವಶ್ಯಕತೆ ಇಲ್ಲ. ಹಾಗೇನಾದರೂ  16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿ ಕಂಡುಬಂದರೆ ಅದನ್ನು ತೆಗೆದು ಆಕಲಾಗುತ್ತದೆ. ನಿಮ್ಮ ಮನೆಯಲ್ಲಿ 16  ವರ್ಷಕ್ಕಿಂತ ಕೆಳಗಿನವರಿದ್ದು ಅವರೇನಾದರೂ ಅವರ ವೈಯಕ್ತಿಕ ಮಾಹಿತಿಯನ್ನು ಆಪ್ ನಲ್ಲಿ ನೀಡಿದ್ದರೆ ನಮಗೆ ತಿಳಿಸಿ.

ಸ್ವಯಂ ಚಾಲಿತ ನಿರ್ಧಾರಗಳನ್ನು

ನಿಮ್ಮ ಮಾಹಿತಿಯನ್ನು ಸ್ವಯಂ ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಸುವುದಿಲ್ಲ.

ನಮ್ಮ ಸೇವೆಯ ಬಳಕೆದಾರರಾಗಿ ನಿಮ್ಮ ಹಕ್ಕುಗಳು

ನಿಮ್ಮ ಮಾಹಿತಿಗೆ ನೀವೇ ಮಾಲಿಕರು. ನಿಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು  ಮಾಹಿತಿಯನ್ನು ನಿರ್ವಹಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ನೀವು ಮನವಿ ಮಾಡಬಹುದು.

 • ನಿಮ್ಮ ಮಾಹಿತಿಯ ಒಂದು ಪಕ್ಷಿನೋಟ ನೀಡುವುದು.
 • ನಿಮ್ಮ ಮಾಹಿತಿಯನ್ನು ತಿದ್ದುವುದು ಮತ್ತು ತೆಗೆದು ಹಾಕುವುದು.
 • ಇತರೆ ಪಾಲುದಾರರಿಗೆ  ಯಾವ ಮಾಹಿತಿಯನ್ನು ನೀಡಬೇಕೆಂದು ನೀವು ಆಯ್ಕೆ ಮಾಡುವುದು.

ಇವುಗಳೊಂದಿಗೆ ನೀವು ನಿಮ್ಮ ಮಾಹಿತಿಯನ್ನು ವಿಶ್ಲೇಷಿಸಲು ನಮಗೆ ಕೊಟ್ಟ ಸಮ್ಮತಿಯನ್ನು ವಾಪಸ್ಸು ಪಡೆಯಬಹುದು. ಈ ಮೇಲಿನ ನಿಮ್ಮ ಹಕ್ಕುಗಳನ್ನು ಚಲಾಯಿಸಲು ನೀವು ನಮಗೆ   info@smartfarmingtech.com  ಗೆ   ಇಮೇಲ್        ಮಾಡಬಹುದು. ದಯವಿಟ್ಟು ಇಮೇಲ್ ಮಾಡುವಾಗ ನೀವೇ ಮನವಿಯನ್ನು ಮಾಡಿರುವುದು ಎಂದು ಖಾತ್ರಿ ಪಡಿಸಲು  ನಿಮ್ಮ ಗುರುತಿನ ದಾಖಲಾತಿಯನ್ನು ಲಗತ್ತಿಸಿ (ಅಟ್ಯಾಚ್) ಮಾಡಿ. ನಿಮ್ಮ ಗುರುತಿನ ಸಂಖ್ಯೆ, ಭಾವಚಿತ್ರ, ಮುಂತಾದ ಮುಖ್ಯ ಮಾಹಿತಿಯನ್ನು ಇತರರಿಗೆ ಕಾಣದಂತೆ ಮರೆಮಾಚಲಾಗಿರುತ್ತದೆ. 

ಈ ಗೌಪ್ಯತಾ ನೀತಿಯಲ್ಲಿ ಬದಲಾವಣೆ

ಕಾಲಕಾಲಕ್ಕೆ ಈ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಹಾಗಾಗಿ ನೀವು ಆಗಾಗ ಈ ಗೌಪ್ಯತಾ ನೀತಿಯನ್ನು ಓದುತ್ತಿರಬೇಕು. ಗೌಪ್ಯತಾ ನೀತಿಯನ್ನು ಬದಲಾವಣೆ ಮಾಡಿದಾಗ ನಿಮಗೆ ತಿಳಿಸಲಾಗುತ್ತದೆ. ಈ ಪುಟದಲ್ಲಿ ಪ್ರಕಟಿಸಿದ ತಕ್ಷಣ ಬದಲಾದ ನೀತಿ ಜಾರಿಯಲ್ಲಿರುತ್ತದೆ.

ನಮ್ಮನ್ನು ಸಂಪರ್ಕಿಸುವುದು

ನಮ್ಮ ಗೌಪ್ಯತಾ ನೀತಿಯ ಬಗ್ಗೆ ನಿಮಗೇನಾದರು ಪ್ರಶ್ನೆ ಅಥವಾ ಸಲಹೆಗಳಿದ್ದರೆ ಮೇಲೆ ತಿಳಿಸಿದ ವಿಳಾಸ ಅಥವಾ ಇಮೇಲ್ ಗೆ ಕಳುಹಿಸಿ.